ಅಭಿಪ್ರಾಯ / ಸಲಹೆಗಳು

ಜಾನುವಾರು ವಿಭಾಗ

ಜಾನುವಾರು ಅಭಿವೃದ್ಧಿ ಕೃಷಿ ಆಧಾರಿತ ಗ್ರಾಮೀಣಾ ರೈತರ ಆರ್ಥಿಕ ಅಭಿವೃದ್ದಿಗೆ ಜಾನುವಾರು ಮತ್ತು ಮೇವು ಉತ್ಪಾದನಾ ಚಟುವಟಿಕೆಗಳು ಸದೃಢವಾದ ಆಧಾರ ನೀಡುತ್ತದೆ. ಗ್ರಾಮೀಣ ಭಾರತದಲ್ಲಿ ಬಹುಪಾಲು ಭೂರಹಿತ ಕೃಷಿ ಕಾರ್ಮಿಕರು ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಹೆಚ್ಚುವರಿ ಆದಾಯಕ್ಕಾಗಿ ಜಾನುವಾರುಗಳನ್ನು ಉಪಕಸುಬಾಗಿ ಸಾಕುತ್ತಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆ ಪರಸ್ಪರ ಅವಲಂಬಿತವಾಗಿದ್ದು, ಹೆಚ್ಚು ಮೌಲ್ಯದ ಪ್ರಾಣಿ ಮೂಲದ ಆಹಾರ ಉತ್ಪಾದಿಸುವ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಲು ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಸಾಕುವುದು ಅತ್ಯವಶ್ಯಕವಾಗಿದೆ. ಆದಕಾರಣ ಸಮಗ್ರ ಕೃಷಿ ಪದ್ಧತಿಯಲ್ಲಿ ಜಾನುವಾರು ಸಾಗಾಣಿಕೆ ಸುಸ್ಥಿರ & ಲಾಭಾದಾಯಕ ಪದ್ದತಿಯೆಂದು ಕಂಡು ಬಂದಿದೆ. ಗ್ರಾಮೀಣ ಮಟ್ಟದಲ್ಲಿ ಜಾನುವಾರು ಚಟುವಟಿಕೆಗಳನ್ನು ಅನುಷ್ಠಾನ ಮಾಡುವುದರಿಂದ ಸಾವಯವ ಕೃಷಿಗೆ, ಗ್ರಾಮದ ಎಲ್ಲಾ ರೈತರಿಗೆ & ಭೂರಹಿತ ಪ್ರತಿ ಬಡವರ ಜೀವನುದ್ದಾರಕ್ಕೆ ಒತ್ತು ನೀಡಿದಂತಾಗುತ್ತದೆ. ಇದು ಯೋಜನೆಯ ಪ್ರಮುಖ ಉದ್ದೇಶವಾಗುತ್ತದೆ.


ಪ್ರಸಕ್ತ ಸಾಲಿನಲ್ಲಿ ಜಾನುವಾರು ಫಟಕದಡಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು & ಚಟುವಟಿಕೆಗಳು :

    1. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ :

   ಜಲಾನಯನ ಅಭಿವೃದ್ಧಿ ಈ ಯೋಜನೆಯಡಿ ಈ ಕೆಳಕಂಡ ಚಟುವಟಿಕೆಗಳನ್ನು ಅನುಷ್ಠಾನಕ್ಕಾಗಿ ಗುರುತಿಸಲಾಗಿದೆ.

      1. ಜಲಾನಯನ ಕಾರ್ಯಕ್ರಮಗಳು :

 

        1. 10 ಗುಂಟೆ ನೀರಾವರಿ ಜಮೀನಿನಲ್ಲಿ ಸುಧಾರಿತ ಬಹುವಾರ್ಷಿಕ ಮೇವು ಬೆಳೆ ಬೆಳೆಯುವುದು.
        2. ಬದುಗಳ ಮೇಲೆ ಬೆಳೆ ಹಂಚಿನಲ್ಲಿ ಸುಧಾರಿತ ಬಹುವಾರ್ಷಿಕ ಮೇವು ಬೆಳೆಯುವುದು.
        3. ಮಿನಿಕಿಟ್ ಬಳಸಿ ಸುಧಾರಿತ ಮೇವು ಬೆಳೆಯುವುದು.
        4. ಸುಧಾರಿತ ಮೇವು ನರ್ಸರಿ ಸ್ಥಾಪಿಸುವುದು.
        5. ಅಜೋಲಾ ಬೆಳೆಸುವುದು ಇತ್ಯಾದಿಗಳು.

 

                   B. ಉತ್ಪಾದನಾ ಪದ್ದತಿಗಳು ಮತ್ತು ಕಿರು ಉದ್ದಿಮೆಗಳಡಿ ಈ ಕೆಳಕಂಡ ಚಟುವಟಿಕೆಗಳನ್ನು ಗುರುತಿಸಲಾಗಿದೆ.

        1. ಜಾನುವಾರು ಆರೋಗ್ಯ ಶಿಬಿರಗಳು
        2. ಟ್ರೆವಿಸ್ ಅಳವಡಿಸುವುದು.
        3. ಕೋಳಿ ಸಾಕಾಣಿಕೆ..
        4. ರಸಮೇವು ತಯಾರಿಕೆ ಇತ್ಯಾದಿಗಳು.

          II. ಸುಜಲಾ-III ಯೋಜನೆಯಡಿ

ಈ ಕಾರ್ಯಕ್ರಮದಡಿ ಭೂರಹಿತ ಕಾರ್ಮಿಕ ಕುಟುಂಬಕ್ಕೆ ಗರಿಷ್ಠ ರೂ, 10,000/- ವೆಚ್ಚ ಮೀರದಂತೆ ಕೆಳಕಂಡ ಚಟುವಟಿಕೆಗಳನ್ನು ಗುರುತಿಸಲಾಗಿದೆ.

    1. ಗಿರಿರಾಜ ಕೋಳಿ ಘಟಕ
    2. ಡೈರಿ ಯೂನಿಟ್ : ಒಂದು ಹೆಫರ್ ಕಾಫ್ 50%, ಸಿ.ಬಿ/ ಸಾಹಿವಾಲ್/ ಥರ್ಪಕ/ ಗಿರಿ/ಡಿಯೋನಿ/ಗ್ರೇಡೆಡ್ ಎಮ್ಮೆ ಮತ್ತು ಸ್ಥಳೀಯ ಗಂಡು ಕರು ತಳಿ.
    3. ಟಗರು ಮರಿ ವಿತರಣೆ.

ಇತ್ತೀಚಿನ ನವೀಕರಣ​ : 26-11-2019 11:46 AM ಅನುಮೋದಕರು: Ravikumar K N


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080